ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರ ವಿವಾಹದ ರಿಸೆಪ್ಷನ್​ ವಿಡಿಯೋ | DeepVeer Reception Bangalore

2018-11-22 2

ಬಾಲಿವುಡ್ ಲವ್ ಬರ್ಡ್ಸ್ ಗಳಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದೂರದ ಇಟಲಿಯಲ್ಲಿ ಕಾಲಿಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ, ತುಂಬಾನೇ ಖಾಸಗಿಯಾಗಿ ನಡೆದ ಈ ವಿವಾಹ ಸಮಾರಂಭದಲ್ಲಿ ಕೆಲವೇ ಆಪ್ತ ಕುಟುಂಬರಿಗೆ, ಆಹ್ವಾನ ನೀಡಲಾಗಿತ್ತಂತೆ! ಇಟಲಿಯ ಉತ್ತರ ಕೊ‌ಮೊ ಸರೋವರದ ತೀರದ ಐಷರಾಮಿ ವಿಲ್ಲಾದಲ್ಲಿ ಈ ನವದಂಪತಿಗಳು ಸಪ್ತಪದಿ ತುಳಿದಿದ್ದರು... ಅದೂ ಅಲ್ಲದೆ ಇನ್ನೂ ಆಸಕ್ತಿಕರ ಸಂಗತಿಗಳೆಂದರೆ, ಕೊಂಕಣಿ ಮತ್ತು ಸಿಖ್‌ ಸಂಪ್ರದಾಯದಂತೆ ಈ ವಿವಾಹ ನೆರವೇರಿತು. ಇನ್ನು ಇಟಲಿಯ ಕೊಮೊ ಸರೋವರದ ಬಗ್ಗೆ ಹೇಳುವುದಾದರೆ, ಇದು ಅತ್ಯಂತ ರಮಣೀಯ ಪ್ರಕೃತಿ ಸೌಂದರ್ಯವುಳ್ಳ ಜಾಗವಂತೆ. ಅಲ್ಲಿನ ಅದ್ಭುತ ಸೊಬಗಿನ ಮೇಲೆ, ಒಮ್ಮೆ ಆಲೋಚನೆ ಬಂದರೂ ಸಾಕಂತೆ, ಅಲ್ಲಿಗೆ ಹೋಗಬೇಕೆನಿಸುತ್ತದೆ! ಹೀಗಾಗಿಯೇ, ದೀಪಿಕಾ ಹಾಗೂ ರಣವೀರ್ ಈ ಪ್ರದೇಶದ ತೀರವನ್ನೇ ಆಯ್ಕೆ ಮಾಡಿಕೊಂಡಿದ್ದಾರಂತ ಗುಸು ಗುಸು ಮಾತು ಕೂಡ ಕೇಳಿಬಂದಿತ್ತು. ಇದು ಏನೇ ಇರಲಿ ಆದರೆ ನಿನ್ನ ನಡೆದ ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ನಡೆದ ಬಾಲಿವುಡ್​ ಇವರ ವಿವಾಹದ ರಿಸೆಪ್ಷನ್​ ಮಾತ್ರ ಎಲ್ಲರು ತದೇಕಚಿತ್ತದಿಂದ ಈ ನವದಂಪತಿಗಳನ್ನು ನೋಡುವಂತಿತ್ತು! ಬನ್ನಿ ಅವರ ವಿವಾಹದ ರಿಸೆಪ್ಷನ್​ ವಿಡಿಯೋ ವಿಡಿಯೋ ನಿಮಗಾಗಿ ಇಲ್ಲಿ ನೀಡಿದ್ದೇವೆ.. ನೋಡಿ ಕಣ್ತುಂಬಿಕೊಳ್ಳಿ